ಕಿರುಮಿದುಳು

  ಹಿಮ್ಮೆದುಳಿನ ಹಿಂಭಾಗ (ಸೆರಿಬೆಲ್ಲಂ), ಶರೀರದ ಚಲನವಲನಗಳನ್ನು ಸಮನ್ವಯ ಮಾಡುವುದೂ ಶರೀರದ ಸಮಸ್ಥಿತಿಯನ್ನು ಕಾಪಾಡುವುದೂ ಇದರ ಕೆಲಸ. ಮೀನುಗಳಿಗಿಂತ ಕೆಳದರ್ಜೆಯ ಪ್ರಾಣಿಗಳಲ್ಲಿ ಇದು ಸಾಕಷ್ಟು ವಿಕಸಿತವಾಗಿಲ್ಲ. ಷಾರ್ಕ್ ಮೊದಲಾದ ಮೀನುಗಳಲೂ,್ಲ ಹಕ್ಕಿಗಳಲ್ಲೂ ಮನುಷ್ಯನನ್ನೊಳಗೊಂಡಂತೆ ಸಸ್ತನಿಗಳಲ್ಲೂ ಇದು ಚೆನ್ನಾಗಿ ವಿಕಸಿತವಾಗಿದೆ. (ನೋಡಿ- ಮಿದುಳು)

(ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ